ಹೈ.ಕ.ಶಿ. ಸಂಸ್ಥೆಯ

ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಬೀದರ

ದಿನಾಂಕ: ೦೧-೦೮-೨೦೨೩

ಸಂಪಾದಕರು / ವರದಿಗಾರರು

__________________________

___________________________

____________________________

 

ಪತ್ರಿಕಾ ಪ್ರಕಟಣೆಗಾಗಿ

 

ರಾಂಪೂರೆಯವರ ವಿಚಾರ ಧಾರೆಗಳು ಅಭಿವೃದ್ಧಿಗೆ ಪೂರಕ –  ಡಾ. ರಜನೀಶ ಎಸ್. ವಾಲಿ

 

ಬೀದರ: ೧ನೇ ಅಗಷ್ಟ ೨೦೨೩ರಂದು ನಗರದ ಹೈ.ಕ.ಶಿ. ಸಂಸ್ಥೆಯ ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ದಿನಾಂಕ: ೦೧-೦೮-೨೦೨೩ರಂದು ಸಮಯ ಬೆಳಿಗ್ಗೆ ೧೦.೦೦ ಗಂಟೆಗೆ  ದಿ: ಮಹಾದೇವಪ್ಪ ರಾಂಪೂರೆಯವರ ೧೦೨ನೇ ಜನ್ಮದಿನೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹೈ.ಕ.ಶಿ. ಸಂಸ್ಥೆಯ ಅಡಳಿತ ಮಂಡಳಿ ಸದಸ್ಯರು ಹಾಗೂ ಬಿ.ವಿ.ಬಿ. ಮಹಾವಿದ್ಯಾಲಯ ಆವರಣದ ಶಾಲಾ ಕಾಲೇಜುಗಳ ಸಂಚಾಲಕರಾದ ಡಾ. ರಜನೀಶ್ ಎಸ್. ವಾಲಿ,  ರಾಜ್ಯದಲ್ಲಿ ಹೈದ್ರಾಬಾದ ಕರ್ನಾಟಕ ಭಾಗವು ಅತ್ಯಂತ ಹಿಂದುಳಿದ ಪ್ರದೇಶವೆಂದೇ ಕರೆಯಲ್ಪಡುವ ಈ ಭಾಗದ ಅಭಿವೃದ್ಧಿಗೆ ವರಪುತ್ರನ್ನಾಗಿ ಜನಿಸಿ ಬಂದ ದಿ: ಮಹಾದೇವಪ್ಪ ರಾಂಪೂರೆಯವರು ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯ ಪ್ರಗತಿ ಸಾಧಿಸುವುದರೊಂದಿಗೆ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ ಮಹಾಪುರುಷ ಎಂದು ಅಭಿಪ್ರಾಯಪಟ್ಟರು.

        ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ: ಶಿವರಾಜ ಜಿ. ಮಠ ಅವರು ಮಾತನಾಡುತ್ತಾ  ದಿ: ಮಹಾದೇವಪ್ಪ ರಾಂಪೂರೆಯವರ ಜೀವನ ಚಿತ್ರಣ ತಿಳಿಸಿದರು.  ಈ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ೧೯೫೮ರಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಗೆ ಅಡಿಪಾಯ ಹಾಕಿ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆಗೈದ ಮಹಾಪುರುಷರು ಇವರು ತಾಂತ್ರಿಕ, ವೈದ್ಯಕೀಯ, ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಇತರೆ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.

        ದಿ: ಮಹಾದೇವಪ್ಪ ರಾಂಪೂರೆಯವರ ಕುರಿತು ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಶ್ರೀಮತಿ ಶಿವಲೀಲಾ ವೀರಯ್ಯಾ ಸ್ವರಚಿತ ಕವನ ವಾಚನ ಮಾಡಿದರು.

        ದಿ: ಮಹಾದೇವಪ್ಪ ರಾಂಪೂರೆಯವರ ಜನ್ಮದಿನೋತ್ಸವ ಪ್ರಯುಕ್ತ ಮಹಾವಿದ್ಯಾಲಯದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಡಾ. ರಜನೀಶ ಎಸ್.ವಾಲಿಯವರು ನಡೆಸಿಕೊಟ್ಟರು, ಈ ಸಂದರ್ಭದಲ್ಲಿ ಬಿ.ವಿ.ಬಿ. ಮಹಾವಿದ್ಯಾಲಯದ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ಕನ್ನಕಟ್ಟೆ, ಶ್ರೀ ಶರಣ ಬಸವೇಶ್ವರ ಅಭ್ಯಸಾರ್ಥ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಶೀಲಾ, ಬಿ.ವಿ.ಬಿ. ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದೀಪಾ ರಾಗ, ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ  ಪ್ರಾರ್ಥನೆ ಗೀತೆಯನ್ನು ಶ್ರೀಮತಿ ರೇಣುಕಾ ಸ್ವಾಮಿ ಹಾಡಿದರೆ, ಸ್ವಾಗತವನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠಲ ರಡ್ಡಿ ನೆರವೇರಿಸಿದರು, ಬಿ.ವಿ.ಬಿ. ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆ, ವಂದಿಸಿದರು, ಸಿಬ್ಬಂದಿ ಕಾರ್ಯದರ್ಶಿಗಳಾದ ಡಾ: ಹಣಮಂತಪ್ಪ ಬಿ. ಸೇಡಂಕರ ಅವರು ಕಾರ್ಯಕ್ರಮ ನಿರ್ವಹಿಸಿದರು

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಬೊಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.

 

ಪ್ರಾಂಶುಪಾಲರು

Leave A Comment

We’re Waiting To Help You

Get in touch with us today and let’s start transforming your question.

Click here for Public Grievance