ಬೀದರ್ ದಸರಾ ಪತಂಗ ಉತ್ಸವಕ್ಕೆ ಹಾರ್ದಿಕ ಸ್ವಾಗತ 
 
ಎಚ್.ಕೆ.ಇ ಸಂಸ್ಥೆಯ ಬಿ.ವಿ ಭೂಮರಡ್ದಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಬೀದರ ಹಾಗೂ ಬೀದರ ದಸರಾ ಪತಂಗ ಉತ್ಸವ ಸಮಿತಿ ವತಿಯಿಂದ ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯ ಪ್ರತೀಕವಾದ ಬೀದರ ದಸರಾ ಪತಂಗ ಉತ್ಸವ–2026. ದಿನಾಂಕ 17 ಮತ್ತು 18 ಅಕ್ಟೋಬರ್ 2026 ರಂದು ಬಿ.ವಿ.ಬಿ ಮಹಾವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದೆ.
 
ನಶಿಸುತ್ತಿರುವ ಕಲೆ ಸಂಸ್ಕೃತಿ ಹಾಗೂ ಪತಂಗ ಹಾರಿಸುವ  ಸಂಭ್ರಮವನ್ನು  ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಎಚ್. ಕೆ . ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಬಿ.ವಿ.ಬಿ ಶಾಲಾ ಕಾಲೇಜುಗಳ ಆವರಣದ ಸಂಚಾಲಕರಾದ ಡಾ. ರಜನೀಶ್ ವಾಲಿ  ಈ ಪತಂಗ ಉತ್ಸವವನ್ನು ಆಯೋಜನೆ ಮಾಡಿದ್ದಾರೆ. ಬಣ್ಣಬಣ್ಣದ ಪತಂಗಗಳ ಹಾರಾಟದೊಂದಿಗೆ ನಮ್ಮ ಸಂಸ್ಕೃತಿಯ ವೈಭವವನ್ನು ಸಂಭ್ರಮಿಸೋಣ. ಪರಂಪರೆಯನ್ನು ಉಳಿಸಿ, ಸಂಸ್ಕೃತಿಯನ್ನು ಬೆಳೆಸಿ, ಬೀದರನ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯೋಣ.
ಈ ಸುಂದರ ಉತ್ಸವವು ಎಲ್ಲರ ಮನದಲ್ಲಿ ಸಂತೋಷ, ಸೌಹಾರ್ದತೆ ಮತ್ತು ಏಕತೆಯ ಸಂದೇಶವನ್ನು ಸಾರಲಿ ಎಂದು ಹಾರೈಸುತ್ತೇವೆ ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹೇಳಿದರು.
 
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ, ನಮ್ಮ ಪರಂಪರೆ ನಮ್ಮ ಸಂಪತ್ತು! 

Leave A Comment

We’re Waiting To Help You

Get in touch with us today and let’s start transforming your question.

Click here for Public Grievance